Posts

ಗುಡ್ಡೆ ಹಳ್ಳಿ - ನಗರಸಭೆ ವ್ಯಾಪ್ತಿಯ ಕುಗ್ರಾಮ

ಕುಗ್ರಾಮಗಳ ಬಗ್ಗೆ ಸಾಕಷ್ಟು ಕೇಳಿದ್ದೇವೆ, ಓದಿದ್ದೇವೆ ನೋಡಿದ್ದೇವೆ ಆದರೆ ನಗರವ್ಯಾಪ್ತಿಯಲ್ಲಿಯೂ ಕೂಡ ಕುಗ್ರಾಮಗಳಿವೆ ಎಂದರೆ ಇದೆನಪ್ಪ ಎಂದು ಆಶ್ಚರ್ಯವೆನಿಸಬಹುದು. ಇದು ವಿಚಿತ್ರವಾದರೂ ಕೂಡ ಸತ್ಯ. ಅಂತಹ ಒಂದು ಕುಗ್ರಾಮ ಕಾರವಾರ ತಾಲೂಕಿನ ನಗರಸಭೆ ವ್ಯಾಪ್ತಿಯಲ್ಲಿದೆ. ಅದುವೆ ಗುಡ್ಡೆಹಳ್ಳಿ ಎಂಬ ಗ್ರಾಮ. ಜಿಲ್ಲೆ ಹಾಗೂ ತಾಲೂಕಾ ಕೇಂದ್ರವಾದ ಕಾರವಾರ ನಗರದಿಂದ ಈ ಕುಗ್ರಾಮ ಸುಮಾರು ಎಂಟು ಕಿಮಿ ದೂರದಲ್ಲಿದೆ. ಇದು ಕಾರವಾರ ನಗರಸಭೆಯ ವಾರ್ಡ್ ನಂ. 30 ವ್ಯಾಪ್ತಿಗೆ ಸೇರಿದ್ದಾಗಿದೆ. ಹೆಸರೇ ಹೇಳುವಂತೆ ಇದು ಗುಡ್ಡದ ಪ್ರದೇಶದ ಹಳ್ಳಿ. ಹಾಗಾಗಿ ಹೆಸರು ಗುಡ್ಡೆಹಳ್ಳಿ ಸಮುದ್ರ ಮಟ್ಟದಿಂದ ಸುಮಾರು ಎರಡು ಸಾವಿರ ಅಡಿ ಎತ್ತರದಲ್ಲಿರುವ ಈ ನಗರವ್ಯಾಪ್ತಿಯ ಕುಗ್ರಾಮ ಎಲ್ಲ ಮೂಲಭೂತ ಸೌಲಭ್ಯಗಳಿಂದ ವಂಚಿತ ಗ್ರಾಮ ಈ ಗ್ರಾಮಕ್ಕೆ ತಲುಪಲು ಕಡಿದಾದ ಕಾಲುದಾರಿಯೊಂದನ್ನು ಬಿಟ್ಟರೆ ಮತ್ತೆನಿಲ್ಲ. ಸುಮಾರು ಐವತ್ತರಷ್ಟು ಕುಟುಂಬಗಳನ್ನು ಹೊಂದಿರುವ ಗುಡ್ಡೆಹಳ್ಳಿಯಲ್ಲಿ ಇರುವವರು ಒಂದೆ ಸಮುದಾಯದ ಅಂದರೆ ಬುಡಕಟ್ಟು ಜನಾಂಗವಾದ ಹಾಲಕ್ಕಿ ಸಮಾಜದವರು. ಹಲವು ವರ್ಷಗಳ ಹಿಂದೆ ಇಲ್ಲಿಗೆ ಬಂದು ವಾಸ್ತವ್ಯಮಾಡಿರುವ ಈ ಕುಟುಂಬಗಳ ಮುಖ್ಯ ಜೀವನಾಧಾರ ಕೃಷಿ ಜೊತೆಗೆ ವ್ಯವಹಾರಿಕವಾಗಿ ಅಲ್ಪಸ್ವಲ್ಪ ಮರಗೆಲಸ. ಗುಡ್ಡಳ್ಳಿಯು ಬಿಣಗಾ ಗ್ರಾಮದ ಮಜಿರೆಯಾಗಿತ್ತು. ಮೊದಲು ಗ್ರಾಮ ಪಂಚಾಯತ್ ಆಗಿದ್ದ ಬಿಣಗಾ ಗ್ರಾಮವನ್ನು ಕಾರವಾರ ನಗರಸಭೆ ವ್ಯಾಪ್ತಿಗೆ ಸೇರ್ಪಡೆಗೊಳಿಸಿದ ನಂತರ

ಕೊಳವೆಬಾವಿಯಲ್ಲಿ ನೀರು ಸಿಗದಿದ್ದರೆ ಕಾಯಿರಿ

ಪ್ರಜಾವಾಣಿ ಕೃಪೆ ಕೊಳವೆ ಬಾವಿಯಲ್ಲಿ ನೀರು ಸಿಕ್ಕಿಲ್ಲ ಎಂದ ತಕ್ಷಣ ಕೇಸಿಂಗ್‌ ಪೈಪ್‌ ತೆಗೆದು ಮುಚ್ಚಿ ಬಿಡಬೇಡಿ. ಕನಿಷ್ಠ ಒಂದು ವಾರ ಕಾಯಿರಿ. ನೀರು ಬರುವ ಸಾಧ್ಯತೆ ಇದೆ ಎಂದು ಜಲ ಮರುಪೂರಣ ತಜ್ಞ ದೇವರಾಜ ರೆಡ್ಡಿ ಸಲಹೆ ನೀಡಿದ್ದಾರೆ. ಅವರು ಪ್ರಜಾವಾಣಿ- ಡೆಕ್ಕನ್‌ ಹೆರಾಲ್ಡ್‌ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ನೀಡಿದರು. ಹಿಂದೆ ಕೊಳವೆಬಾವಿಯನ್ನು ನಿಧಾನವಾಗಿ ಕೊರೆಯಲಾಗುತ್ತಿತ್ತು. ಒಂದು ರಾಡ್‌ ಇಳಿಸಲು ಒಂದು ಗಂಟೆ ಬೇಕಿತ್ತು. ಈಗ ಎಲ್ಲವೂ ವೇಗವಾಗಿದೆ. ಐದೇ ನಿಮಿಷಕ್ಕೆ ರಾಡ್‌ ಇಳಿಸಲು ಸಾಧ್ಯವಾಗುತ್ತದೆ. ಆಗ ಅರ್ಧ ಇಂಚು, ಒಂದಿಂಚು ನೀರು ಸಿಕ್ಕಿದರೂ ಅದು ಹೊರಹಾಕುವ ಮಣ್ಣಿನ ದೂಳಿನೊಂದಿಗೆ ಬಂದು ಬಿಡುತ್ತದೆ. ಮಣ್ಣು ಕೆಸರಾದಂತೆ ಕಂಡರೂ ನೀರಿಲ್ಲ ಎಂದು ನಿರ್ಧರಿಸಿಬಿಡುವ ಅಪಾಯ ಇದೆ. ಒಂದಿಂಚು ನೀರು ಸಿಕ್ಕಿದರೆ ಒಂದು ಎಕರೆ ಜಾಗಕ್ಕೆ ಸಾಕಾಗುತ್ತದೆ. ತಮಿಳುನಾಡಿನಲ್ಲಿ ಈ ಬಗ್ಗೆ ಕಾನೂನು ಇದೆ. ಕೊಳವೆಬಾವಿ ತೆಗೆದ ಬಳಿಕ ಕೇಸಿಂಗ್‌ ಪೈಪ್‌ ತೆಗೆಯಬೇಕಿದ್ದರೆ ಒಂದು ವಾರ ಕಾಯಲೇಬೇಕು. ಯಾಕೆಂದರೆ ಆಮೇಲೂ ಒರತೆಯ ಬರಬಹುದು. ನೀರು ಸಿಗದ ಕೊಳವೆಬಾವಿಗೆ ಒಂದು ಟ್ಯಾಂಕರ್‌ ನೀರು ಬಿಡಬೇಕು. ಆ ನೀರನ್ನು ಕೊಳವೆಬಾವಿ ಹಿಡಿದಿಟ್ಟುಕೊಂಡರೆ ಅಲ್ಲಿ ನೀರು ಸಿಗಲು ಅವಕಾಶ ಇದೆ ಎಂದರ್ಥ. ನೀರು ಮರುಪೂರಣ ಮಾಡಲೂ ಸಾಧ್ಯವಿದೆ. ನೀರು ಹಿಡಿದಿಟ್ಟುಕೊಳ್ಳದಿದ್ದರೆ ಅಲ್ಲಿ ನೀರು ಮರುಪೂರಣವೂ ಸಾಧ್ಯವಿಲ್ಲ. ಕೊಳವೆಬಾವಿ ವಿಫ

ನಿಜವಾದ ಜನ ನಾಯಕ ನರೇಂದ್ರ ಮೋದಿ

ಮೋದಿಯ ಪರವಾಗಿ ಪ್ರಚಾರ ಮಾಡುತ್ತಿರುವ ನಮ್ಮಂತವರಿಗೆ ರಾಜಕೀಯದ ನಂಟು ಇಲ್ಲ. ನಮ್ಮ ಕ್ಷೇತ್ರದ ಶಾಸಕರ ಜೊತೆಯಲ್ಲೆ ನಮಗೆ ಸಂಬಂಧವಿಲ್ಲ. ಯಾವುದೇ ತರಹದ ರಾಜಕೀಯ ಚಟುವಟಿಕೆಗಳಲ್ಲಿ ನಾವುಗಳು ಭಾಗಿಯಾಗುವುದಿಲ್ಲ. ರಾಜಕಾರಣದ ಹತ್ತಿರವೂ ನಾವುಗಳು ಸುಳಿಯುವುದಿಲ್ಲ. ರಾಜಕಾರಣಿಗಳಿಂದ ನಮಗೆ ಯಾವ ಲಾಭವೂ ಆಗಬೇಕಾದ್ದಿಲ್ಲ. ಆದರೂ ನಾವುಗಳು ಮೋದಿಯ ಪರವಾಗಿ ಪ್ರಚಾರ ಮಾಡುತ್ತಿದ್ದೇವೆ. ನಿಜವಾಗಿಯೂ ಜಗತ್ತಿನಲ್ಲಿ ಇದೊಂದು ವಿಸ್ಮಯ. ಸಾಮಾನ್ಯರಲ್ಲಿ ಸಾಮಾನ್ಯರಾದ ನಮ್ಮನ್ನು ಮೋದಿ ಅದು ಹೇಗೆ ತನ್ನತ್ತ ಸೆಳೆದ. ಅದ್ಯಾವ ಶಕ್ತಿ ಮೋದಿಯಲ್ಲಿದೆ. ಇದುವರೆಗೂ ಯಾವ ರಾಜಕಾರಣಿಯ ಬಗೆಗೂ ಆಸಕ್ತಿ ಹೊಂದದ ನಾವುಗಳು ಅದ್ಯಾಕೆ ಮೋದಿಯ ಮೋಹಕ್ಕೆ ಸಿಕ್ಕಿಕೊಂಡೆವು. ಮೋದಿಯಲ್ಲಿ ಯಾವ ಶಕ್ತಿಯೂ ಇಲ್ಲದಿದ್ದರೆ ಶ್ರೀ ಸಾಮಾನ್ಯರನ್ನು ತನ್ನತ್ತ ಸೆಳೆಯಲು ಹೇಗೆ ಸಾಧ್ಯ.? ಅಸಹ್ಯ ರಾಜಕಾರಣಿಗಳಿಂದ ಬೇಸತ್ತಿದ್ದ ಶ್ರೀ ಸಾಮಾನ್ಯ, ಈ ದೇಶಕ್ಕೆ ಇನ್ನು ಭವಿಷ್ಯವಿಲ್ಲವೆಂದು ತೀರ್ಮಾನಿಸಿ, ರಾಜಕಾರಣದಲ್ಲಿ ಆಸಕ್ತಿ ಕಳೆದುಕೊಂಡು , ನನಗೂ ರಾಜಕೀಯಕ್ಕೂ ಸಂಬಂಧವಿಲ್ಲವೆಂದು ರಾಜಕೀಯದಿಂದ ವಿಮುಖವಾಗಬೇಕಾದಾಗಲೇ ಆಶಾ ಕಿರಣದಂತೆ ಕಾಣಿಸಿ ಕೊಂಡವರು ಮೋದಿ. ಮತ್ತೆ ಜನರಲ್ಲಿ ಆಸೆಯೊಂದು ಚಿಗುರೊಡೆಯಿತು, ಭಾರತಕ್ಕೂ ಭವಿಷ್ಯವಿದೆ ಎಂದು ಅನ್ನಿಸಿತ್ತು , ಭಾರತದ ರಾಜಕಾರಣದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಶ್ರೀ ಸಾಮಾನ್ಯನು ಜಾಗೃತನಾದ, ಮೋದಿಯನ್ನು ಉಳಿಸಿಕೊಳ್ಳದಿದ್ದರೆ ಭಾರತಕ್ಕೆ ಭವಿ

ವಿಶ್ವ ನಾಯಕ ಮೋದಿ

ವಿಶ್ವದ ಶ್ರೇಷ್ಠ ನಾಯಕನ ಪಟ್ಟ ಮೋದಿ ಮುಡಿಗೆ,ಪ್ರಶಸ್ತಿ ಪಡೆದ ಮೊದಲ ಭಾರತೀಯ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಯಾವುದು ಉಚಿತ ಯೋಜನೆಗಳನ್ನು ನೀಡಿ ಇವರು ಪ್ರಶಸ್ತಿಗಳನ್ನು ಪಡೆದಿಲ್ಲ ಬದಲಾಗಿ ಜನಪರ ನಾಯಕ ಎಂದು ನಿರೂಪಿಸಿ ಜನರ ಪರವಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ದೇಶವನ್ನು ಸದೃಢವಾಗಿ ನಾಲ್ಕು ವರ್ಷಗಳ ಕಾಲ ಮುನ್ನಡೆಸಿ ಈ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಈಗ ಮತ್ತೊಮ್ಮೆ ಮೋದಿ ಅವರು ವಿಶ್ವದ ಅತ್ಯುತ್ತಮ ಬಲಿಷ್ಠ, ಜನಪರ ನಾಯಕ ಎಂದು ಸಾರಿ ಹೇಳುವಂತೆ ಇದುವರೆಗೂ ಭಾರತದ ಯಾವ ಪ್ರಧಾನಿ ಪಡೆಯದ ಪ್ರಶಸ್ತಿಯನ್ನು ನರೇಂದ್ರ ಮೋದಿ ರವರ ಪಡೆದು ವಿಶ್ವಕ್ಕೆ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಮಾಡಿದ್ದಾರೆ. ಅಷ್ಟಕ್ಕೂ ಆ ಪ್ರಶಸ್ತಿ ಯಾವುದು ಗೊತ್ತಾ ಮತ್ತು ಆ ಪ್ರಶಸ್ತಿಯನ್ನು ಯಾಕೆ ನೀಡಲಾಗುತ್ತದೆ ಗೊತ್ತಾ? ನರೇಂದ್ರ ಮೋದಿ ರವರು 4 ವರ್ಷಗಳ ಕಾಲ ಭಾರತವನ್ನು ಅತ್ಯುತ್ತಮವಾಗಿ ಮುನ್ನಡೆಸಿದ ಕಾರಣಕ್ಕಾಗಿ ಫೀಲಿಪ್ ಕೊಟ್ಲರ್ ಅಂತರಾಷ್ಟ್ರೀಯ ಪ್ರಶಸ್ತಿ ನರೇಂದ್ರ ಮೋದಿ ಅವರಿಗೆ ಇಂದು ದಕ್ಕಿದೆ. ಅವರ ಪಾರದರ್ಶಕ ಆಡಳಿತ, ಬಿಡುವಿಲ್ಲದ ಕಾರ್ಯವೈಕರಿ, ಕೆಲವು ಖಡಕ್ ನಿರ್ಧಾರಗಳಿಂದ ಭಾರತದ ಆರ್ಥಿಕತೆ ಬೆಳೆದಿದ್ದು ಸಾಮಾಜಿಕವಾಗಿ ಹಾಗೂ ತಾಂತ್ರಿಕತೆ ವಿಭಾಗದಲ್ಲಿ ಭಾರತ ಅತ್ಯಾಧುನಿಕ ದೇಶವಾಗಿ ಮಾರ್ಪಟ್ಟಿದೆ. ಆದ ಕಾರಣದಿಂದ ನರೇಂದ್ರ ಮೋದಿ ಅವರಿಗೆ ಪ

ಹರಿಲಾಲ್ ಗಾಂಧಿ

ಕೃಪೆ ವಿಶ್ವವಾಣಿ ದಿನಪತ್ರಿಕೆ ಹೆತ್ತ ತಂದೆಯೇ ತಿರಸ್ಕರಿಸಿದ್ದನ್ನು ಸಹಿಸಿಕೊಳ್ಳಲು ಹರಿಲಾಲನಿಗೆ ಆಗಲೇ ಇಲ್ಲ…! ಮಹಾತ್ಮ ಗಾಂಧಿ ಮಗ ಹರಿಲಾಲ ಒಬ್ಬ ನತದೃಷ್ಟ. ಎಲ್ಲಾ ಇದ್ದೂ ಏನೂ ಇಲ್ಲದವನಂತಾದ ಅದೃಷ್ಟಹೀನ. ಗಾಂಧೀಜಿ ಮಗನಾಗಿ ಹುಟ್ಟಿದರೂ ಸಂಭಾವಿತನಾಗಲಿಲ್ಲ. ಗೌರವದ ಬದುಕು ಸಾಗಿಸಲಿಲ್ಲ. ಹರಿಲಾಲನಿಗೆ ‘ಗಾಂಧಿ’ ಎಂಬ ಅಡ್ಡಹೆಸರಿತ್ತು, ಆತ ಜೀವನದಲ್ಲಿ ಉದ್ಧಾರವಾಗಲು ಅದೊಂದೇ ಸಾಕಾಗಿತ್ತು. ಆದರೆ ಆತ ಅದನ್ನೂ ಉಪಯೋಗಿಸಿಕೊಳ್ಳಲಿಲ್ಲ. ಅವನ ಪ್ರಕಾರ ಅವನಿಗೆ ಅದೇ ಮುಳುವಾಯುತು. ತನ್ನೆಲ್ಲ ಹಿನ್ನಡೆಗೆ ಕಾರಣ ಎಂದು ಆತ ಬಗೆದ. ತಂದೆಯನ್ನು ಇನ್ನಿಲ್ಲದಂತೆ ಹೀಗಳೆದ. ತಂದೆಯಂಥ ಪರಮ ಸ್ವಾರ್ಥಿ ಯಾರೂ ಇಲ್ಲ ಎಂದು ಜರೆದ. ಯಾವ ತಂದೆಯನ್ನು ಇಡೀ ಜಗತ್ತು ಆರಾಧಿಸುತ್ತಿತ್ತೋ ಅದೇ ತಂದೆಯನ್ನು ಹರಿಲಾಲ ತಿರಸ್ಕರಿಸಿದ. ಹರಿಲಾಲ ಗಾಂಧಿ ಜೀವನದ ಕತೆ ಓದುತ್ತಿದ್ದರೆ, ಎಂಥವನಿಗಾದರೂ ಎದೆ ಝಲ್ಲೆನ್ನುತ್ತದೆ. ಎಲ್ಲರಿಗೂ ಗಾಂಧಿಯಂಥ ತಂದೆ ಸಿಗುವುದಿಲ್ಲ. ಆದರೆ ಯಾರಿಗೂ ಹರಿಲಾಲನಂಥ ಮಗ ಮಾತ್ರ ಹುಟ್ಟಲೇಬಾರದು. ಹರಿಲಾಲ ಗಾಂಧಿ ಕುರಿತ ಪುಸ್ತಕ ಸಿದ್ಧಗೊಳಿಸುವಾಗ ನಾನೇ ಅನೇಕ ಕಡೆ ಬಿಕ್ಕಳಿಸಿದ್ದೇನೆ. ಮಮ್ಮಲ ಮರುಗಿದ್ದೇನೆ. ಸಂಕಟದಿಂದ ಚಡಪಡಿಸಿದ್ದೇನೆ. ಮೊದಲ ಬಾರಿಗೆ ಕನ್ನಡದಲ್ಲಿ ಗಾಂಧಿ ಮಗನ ಕಥೆ ಕಟ್ಟಿಕೊಡುತ್ತಿದ್ದೇನೆ. ಇದನ್ನು ಓದಿದರೆ ಗಾಂಧಿ ಮತ್ತಷ್ಟು ಅರ್ಥವಾಗುತ್ತಾ ಹೋಗುತ್ತಾರೆ. ಅವರ ಬಗ್ಗೆ ಗೌರವ ಹೆಚ್ಚಾಗುತ್ತದೆ. ಹರಿಲಾಲನ ಬದುಕಿನ ಕೆ